ವಿದ್ಯಾರ್ಥಿ ದಿಗಂತ್ ಪತ್ತೆಗಾಗಿ ದೈವದ ಮೊರೆಹೋಗಿದ್ದ ಅಣ್ಣ; ಪ್ರಾರ್ಥಿಸಿದ ಬೆನ್ನಲ್ಲೇ ಪ್ರತ್ಯಕ್ಷ! VIDEO

8 months ago 6
ARTICLE AD
ಯಾರಾದರೂ ನಾಪತ್ತೆಯಾದರೆ ನೇಮದ ಸಂದರ್ಭ 'ನಾಪತ್ತೆಯಾದವರು ಎಲ್ಲಿದ್ದಾರೆ, ಹೇಗಿದ್ದಾರೆ, ಶೀಘ್ರ ಪತ್ತೆ ಮಾಡಿ ಕೊಡು' ಎಂದು ದೈವದಲ್ಲಿಯೇ ಕೇಳುವುದು ಕರಾವಳಿಯಲ್ಲಿ ಸರ್ವೇಸಾಮಾನ್ಯ. ಆದ್ದರಿಂದ ನೇಮದ ಸಂದರ್ಭ ಎಲ್ಲರೂ 'ದಿಗಂತ್ ನಾಪತ್ತೆ ವಿಚಾರವನ್ನು ದೈವದಲ್ಲಿ ಕೇಳು' ಎಂದು ಹೇಳಿದ್ದರೂ ದಿಗಂತ್ ಸಹೋದರ ರವಿಯವರು ಮಾತ್ರ 'ನಾನು ದೈವದಲ್ಲಿ ಪ್ರಶ್ನೆ ಕೇಳುದಿಲ್ಲ ನಮ್ಮ ಸೇವೆಗೆ ದೈವವೇ ದಿಗಂತ್‌ನನ್ನು ಪತ್ತೆ ಮಾಡಿಕೊಡಬೇಕು. ನೇಮಕ್ಕೆ ಏರಿರುವ ಧ್ವಜ ಅವರೋಹಣ ಆಗುವುದರೊಳಗೆ ದಿಗಂತ್ ಪತ್ತೆಯಾಗಬೇಕು' ಎಂದು ಸಂಕಲ್ಪ ಮಾಡಿದ್ದರು. ಅದರಂತೆ ರವಿವಾರ ಬೆಳಗ್ಗೆ ಉಳ್ಳಾಕುಳು ಮಗೃಂತಾಯಿ ದೈವದ ನೇಮದ ಧ್ವಜಾವರೋಹಣ ನಡೆದಿದೆ. ಆದರೆ ಶನಿವಾರ ಸಂಜೆಯೇ ದಿಗಂತ್ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಪೊಲೀಸರು ಆತನನ್ನು ಮಂಗಳೂರಿಗೆ ಕರೆ ತಂದಿದ್ದರು. ಇದೀಗ ರವಿಯವರು ಸಂತೋಷಿತರಾಗಿದ್ದು, ನಮ್ಮ ಕುಟುಂಬ ಮಾಡಿರುವ ತಲೆಮಾರುಗಳ ಸೇವೆಗೆ ಫಲ ನೀಡಿದೆ. ದಿಗಂತ್‌ನನ್ನು ಉಳ್ಳಾಕುಲು ಮಗೃಂತಾಯ ದೈವವೆ ಪತ್ತೆ ಹಚ್ಚಿದೆ ಎಂದು ದಿಗಂತ್ ಸಹೋದರ ರವಿ ಹೇಳಿದ್ದಾರೆ.
Read Entire Article