ARTICLE AD
ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿಗೆ ವಿಶ್ವಮಾನ್ಯತೆ ಇದೆ. ಹದವಾದ ಖಾರದ ಜೊತೆಗೆ ಅಡುಗೆಗೆ ಸ್ವಾದಿಷ್ಟ ರುಚಿ ನೀಡಬಲ್ಲ ಈ ಬ್ಯಾಡಗಿ ಮೆಣಸು ಇತ್ತೀಚೆಗೆ ಹವಾಮಾನ ವೈಪರಿತ್ಯದಿಂದಾಗಿ ಕೈಕೊಡುತ್ತಿತ್ತು. ಆದರೆ ಈ ಬಾರಿ ರೈತರಿಗೆ ನಿರೀಕ್ಷೆ ಮೀರಿದ ಬೆಳೆ ದಕ್ಕಿದ್ದರೂ ಬೆಲೆ ಕುಸಿದಿದೆ. ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ಮೆಣಸು ಬಂದ ಪರಿಣಾಮ ದರದಲ್ಲಿ ಕುಸಿತ ಕಂಡು ಬೆಳೆಗಾರರು ನಿರಾಸೆ ಅನುಭವಿಸಿದ್ದಾರೆ.
