ARTICLE AD
ಪ್ರಧಾನಿ ನರೇಂದ್ರ ಮೋದಿ ತಿರುವನಂತಪುರಂನಲ್ಲಿ ನಿರ್ಮಾಣವಾಗಿರುವ ನೂತನ ಅಂತಾರಾಷ್ಟ್ರೀಯ ಬಂದರನ್ನ ಉದ್ಘಾಟನೆಗೊಳಿಸಿದ್ದಾರೆ. ಈ ಬಂದರು ಅದಾನಿ ಗ್ರೂಪ್ ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ ಸಹಭಾಗಿತ್ವದಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅತ್ಯಂತ ಆಳವಾಗಿರುವ ಈ ಬಂದರು ಅಂತಾರಾಷ್ಟ್ರೀಯ ಲಾಜಿಸ್ಟಿಕ್ಸ್ ಮತ್ತು ಜಾಗತೀಕ ಮಟ್ಟದ ವ್ಯಾಪಾರ ವಹಿವಾಟನ್ನ ವೃದ್ಧಿಗಳಿಸಲು ಪೂರಕವಾಗಿದೆ. 8,867 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬಂದರಿನ ಮೂಲಕ ದೊಡ್ಡ ಆದಾಯದ ನಿರೀಕ್ಷೆಯೂ ಇದೆ.
