ARTICLE AD
ಆಪರೇಷನ್ ಸಿಂದೂರ್ ಮೂಲಕ ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೈನಿಕರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ದೇಶದ ಸೈನಿಕರ ಸಾಹಸವನ್ನ ಕೊಂಡಾಡಿರುವ ಭಾರತೀಯರು ಅವರ ಹೆಸರಿನಲ್ಲಿ ಪೂಜೆ, ಹೋಮಗಳನ್ನ ಮಾಡಿಸುತ್ತಿದ್ದಾರೆ. ಕರ್ನಾಟಕದ ದೇವಾಲಯಗಳಲ್ಲೂ ವಿಶೇಷ ಪೂಜೆ, ಹೋಮಗಳನ್ನ ಮಾಡಿಸಲಾಗುತ್ತಿದೆ. ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ, ಶ್ರೀರಂಗಪಟ್ಟಣ, ತುಮಕೂರಿನಲ್ಲೂ ವಿಶೇಷ ಅರ್ಚನೆ ಮಾಡಲಾಗಿದೆ.
