ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಭರವಸೆ ನೀಡುತ್ತಿರುವ ಸರ್ಕಾರಕ್ಕೆ ರಸ್ತೆ ಗುಂಡಿಗಳೇ ದೊಡ್ಡ ಶಾಪವಾಗಿ ಕಾಡುತ್ತಿದೆ. ಅದರಲ್ಲೂ ಐಟಿ ಬಿಟಿ ಸೆಕ್ಟರ್ ಹೊಂದಿರುವ ಬೆಂಗಳೂರಿನ ಭಾಗದಲ್ಲಿ ರಸ್ತೆ ಗುಂಡಿಗಳು ತೀವ್ರವಾಗಿದ್ದು ಜನರನ್ನ ಹೈರಾಣುಗೊಳಿಸಿದೆ. ಇದೀಗ ಟೆಕ್ಕಿಗಳು ಮಹದೇವಪುರದಲ್ಲಿ ವಿಶೇಷ ಪ್ರತಿಭಟನೆಯನ್ನು ನಡೆಸಿದ್ದು ಕನ್ನಡ ಹಾಡಿನ ರಿಮಿಕ್ಸ್ಗಳ ಮೂಲಕ ರಸ್ತೆಗುಂಡಿಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.