Kalaburagi District News: ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಜಿಲ್ಲೆ ಕಲಬುರಗಿಯಲ್ಲಿ ಈಗ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ. ಸದಾ ಅವ್ಯವಸ್ಥೆ, ಬಡತನದಿಂದ ನರಳುತ್ತಿದ್ದ ನಗರದಲ್ಲಿ ಇದೀಗ ಅತ್ಯಂತ ಸುಸಜ್ಜಿತ ಅಂಗನವಾಡಿ ಕೇಂದ್ರಗಳು ನಿರ್ಮಾಣವಾಗುತ್ತಿವೆ. ಮಕ್ಕಳಿಗೆ ಕಲಿಯಲು ಪೂರಕ ವಾತಾವರಣದೊಂದಿಗೆ, ಸ್ವಚ್ಛತೆಗೆ ಆದ್ಯತೆ ನೀಡಲಾಗಿರುವ ಮಾದರಿ ಅಂಗನವಾಡಿ ಕೇಂದ್ರಗಳನ್ನ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ. ಇದರಿಂದಾಗಿ ಬಡ ಮಕ್ಕಳೂ ಸುಸಜ್ಜಿತ ವ್ಯವಸ್ಥೆಗಳಿರುವ ಅಂಗನವಾಡಿಗಳಿಗೆ ಹೋಗಬಹುದಾಗಿದೆ.