ನಮ್ಮ ಕರ್ನಾಟಕದ ಬೆಳಗಾವಿಗೆ ಮಹಾರಾಷ್ಟ್ರ ಆಗಾಗಾ ಖ್ಯಾತೆ ತೆರೆಯುತ್ತಿದ್ದರೆ, ಮತ್ತೊಂದೆಡೆ ಉತ್ತರ ಕ್ಯಾಚಾರ್ ಮತ್ತು ನಾಗಾನ್ ಜಿಲ್ಲೆಗಳಿಗಾಗಿ ಅಸ್ಸಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳು ಕಿತ್ತಾಡುತ್ತಿದ್ದರೆ, ಇನ್ನೊಂದೆಡೆ ಲೇಹ್ ಮತ್ತು ಮನಾಲಿ ಜಿಲ್ಲೆಗಳಿಗಾಗಿ ಹಿಮಾಚಲ ಪ್ರದೇಶ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಗುದ್ದಾಡುತ್ತವೆ. ಈ ನಡುವೆ ಭಾರತದ ಈ ಜಿಲ್ಲೆ ಎರಡು ರಾಜ್ಯಗಳ ಆಡಳಿತಕ್ಕೆ ಒಳಪಟ್ಟರು ಸಹ ತನ್ನ ಮಹತ್ತರ ಸ್ಥಾನವನ್ನು ಉಳಿಸಿ ಕೊಂಡಿದೆ.