Maha Kumbh 2025: ಐತಿಹಾಸಿಕ ಮಹಾಕುಂಭ ಮೇಳಕ್ಕೆ ತೆರೆ ಬಿದ್ದಿದೆ. ಈ ಮಹಾ ಧಾರ್ಮಿಕ ಕಾರ್ಯಕ್ರಮದಲ್ಲಿ ಕೋಟಿಕೋಟಿ ಭಕ್ತರು ಮಿಂದು ಪುನೀತರಾಗಿದ್ದಾರೆ. ಸುಮಾರು 45 ದಿನಗಳ ಕಾಲ ನಡೆದ ಈ ಕುಂಭ ಮೇಳದಿಂದಾಗಿ ಲಕ್ಷಾಂತರ ಮಂದಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಇದೀಗ ಯೋಗಿ ಸರ್ಕಾರದ ಮುಂದೆ ಪ್ರಯಾಗ್‌ರಾಜ್ ಅನ್ನು ಶುದ್ಧಗೊಳಿಸುವುದೇ ಸವಾಲಾಗಿದೆ. ಪುಣ್ಯಸ್ನಾನಕ್ಕೆ ಕೋಟಿ ಕೋಟಿ ಭಕ್ತರು ಆಗಮಿಸಿದ ಪರಿಣಾಮ ಟನ್‌ಗಟ್ಟಲೆ ಕಸ ಸಂಗ್ರಹವಾಗಿದ್ದು, ಇದರ ವಿಲೇವಾರಿಯೇ ತಲೆನೋವಾಗಿದೆ. ಹೀಗಾಗಿ ಯುಪಿ ಸರ್ಕಾರ ಇದರ ಬಗ್ಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ಸಿಎಂ ಯೋಗಿ ಆದಿತ್ಯನಾಥ್, ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸುಮಾರು ಹದಿನೈದು ಸಾವಿರ ಪೌರ ಕಾರ್ಮಿಕರು ಸ್ವಚ್ಛತೆ ಮಾಡುತ್ತಿದ್ದಾರೆ. ಇದು ಹೊಸ ವಿಶ್ವ ದಾಖಲೆ ಸೃಷ್ಟಿಸುವ ಸೂಚನೆಯಿದೆ.