ತುಂಗಾಭದ್ರಾ ನದಿಗೆ ರೀಲ್ಸ್ ಮಾಡಲು ಹಾರಿದ್ದ ಹೈದ್ರಾಬಾದ್ ಮೂಲದ ವೈದ್ಯೆ ಅನನ್ಯ ರಾವ್ ಮೃತದೇಹ ಪತ್ತೆಯಾಗಿದೆ. ಫೆ.19ರಂದು ಸ್ನೇಹಿತೆಯೊಂದಿಗೆ ಕೊಪ್ಪಳಕ್ಕೆ ಪ್ರವಾಸಕ್ಕೆ ಆಗಮಿಸಿದ್ದ ವೈದ್ಯೆ, ರೀಲ್ಸ್ ಮಾಡಲು ನದಿಗೆ ಹಾರಿದ್ದರು. ಉತ್ತಮ ಸ್ವಿಮ್ಮರ್ ಆಗಿದ್ರೂ ಅನನ್ಯ ತುಂಗಾಭದ್ರದ ಸೆಳೆತಕ್ಕೆ ಕೊಚ್ಚಿಹೋಗಿದ್ದರು. ಅವರ ಮೃತ ಶರೀರದ ಹುಡುಕಾಟಕ್ಕೆ ವಿಶೇಷ ತಂಡವನ್ನ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಅಲ್ಲದೆ ಡ್ಯಾಂನಿಂದ ನೀರಿನ ಹೊರಹರಿವನ್ನೂ ತಗ್ಗಿಸಲಾಗಿತ್ತು. ಇದೀಗ ಅವರ ಶರೀರ ಬಂಡೆಗಳ ನಡುವೆ ಸಿಕ್ಕಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.