Karnataka Budget 2025: ರಾಜ್ಯದಲ್ಲಿ ಬಹುಚರ್ಚಿತವಾಗಿದ್ದ ಅನ್ನಭಾಗ್ಯದ ಅಕ್ಕಿ ಮತ್ತು 5 ಅಕ್ಕಿಯ ಹಣದ ಬಗ್ಗೆ ಸರ್ಕಾರ ಹೊಸ ನಿರ್ಧಾರಕ್ಕೆ ಬಂದಿದೆ. ಇನ್ಮುಂದೆ ಹಣದ ಬದಲು ಐದು ಕೆಜಿ ಅಕ್ಕಿಯನ್ನೇ ನೀಡಲು ಸರ್ಕಾರ ತೀರ್ಮಾನಿಸಿದೆ. ಜೊತೆಗೆ ಸಿನಿಮಾವನ್ನು ಕೈಗಾರಿಕೋದ್ಯಮವೆಂದು ಪರಿಗಣಿಸಲಾಗಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರವನ್ನು 200 ರೂಪಾಯಿಗೆ ನಿಗದಿಪಡಿಸಲಾಗಿದೆ. ಇದೇ ವೇಳೆ ಕನ್ನಡ ಸಿನಿಮಾಗಳಿಗೆ ಓಟಿಟಿ ವೇದಿಕೆ ನಿರ್ಮಿಸಲು ತೀರ್ಮಾನಿಸಲಾಗಿದೆ.