ARTICLE AD
Diganth Travel History: ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಕಿದೆಬೆಟ್ಟು ನಿವಾಸಿ ಪದ್ಮನಾಭ ಮತ್ತು ಸುಜಾತಾ ದಂಪತಿಯ ಪುತ್ರ ದಿಗಂತ್ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಫೆ.25ರಂದು ರಾತ್ರಿ ಹೋಗಿದ್ದಾನೆ. ಆದರೆ ಹಿಂದಿರುಗಿ ಬಂದಿಲ್ಲ. ಅನುಮಾನಗೊಂಡ ಮನೆಯವರು ಸ್ಥಳೀಯರ ನೆರವಿನಿಂದ ಹುಡುಕಾಟ ನಡೆಸಿದಾಗ, ರೈಲ್ವೇ ಹಳಿಯಲ್ಲಿ ಆತನ ಚಪ್ಪಲಿಗಳು, ಮೊಬೈಲ್ ಪತ್ತೆಯಾಗಿತ್ತು. ಕೂಡಲೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.. ಚಪ್ಪಲಿಯಲ್ಲಿ ರಕ್ತದ ಕಲೆಗಳೂ ಕಂಡುಬಂದ ಕಾರಣ ಆತಂಕಗೊಂಡ ಮನೆಯವರು ಹಾಗೂ ಊರವರು ಇದು ಡ್ರಗ್ಸ್ ದಂಧೆಕೋರರು ಅಥವಾ ಬೇರೇನಾದರೂ ವ್ಯಕ್ತಿಗಳ ಕೃತ್ಯವಾಗಿರಬಹುದೇ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಈತ ಪರೀಕ್ಷಾ ಭಯದಿಂದ ನಾಪತ್ತೆಯಾಗುವ ಯೋಚನೆ ಮಾಡಿದ್ದಾನೆ. ಪರೀಕ್ಷೆಯ ಭಯ ಆತನನ್ನು ಮನೆ ಬಿಟ್ಟು ಹೋಗುವಂತೆ ಮಾಡಿತು. ಮನೆಯಿಂದ ಸ್ವಲ್ಪ ನಗದನ್ನು ಹಿಡಿದುಕೊಂಡು ಆತ ಹೊರಟಿದ್ದು, ಬೆಂಗಳೂರು ಮುಂತಾದ ಕಡೆ ಸುತ್ತಾಡಿ ಕೊನೆಗೆ ಉಡುಪಿಗೆ ಬಂದಿದ್ದಾನೆ. ಆಗ ಸಿಕ್ಕಿದ್ದಾನೆ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಮನೆ ಬಿಟ್ಟು ಹೋಗಿದ್ದ ದಿಗಂತ್ ಟ್ರಾವೆಲ್ ಹಿಸ್ಟರಿ ವಿಡಿಯೋ ಇಲ್ಲಿದೆ.
